ಸಿನಿಮಾ ರಂಗದಲ್ಲಿ ಬೇಡಿಕೆಯಿರುವಾಗಲೇ ಸಿನಿ ಬದುಕಿನಿಂದ ದೂರ ಉಳಿದು ರಾಜಕೀಯದತ್ತ ಒಲವು ತೋರಿಸಿದವರು ಚಂದನವನದ ಮೋಹಕ ತಾರೆ ರಮ್ಯಾ (Ramya). ರಾಜಕೀಯದಲ್ಲಿ ತೊಡಗಿಸಿಕೊಂಡರೂ ರಾಜಕೀಯ ರಂಗದಲ್ಲಿ ಹೇಳುವಷ್ಟೇನು ಯಶಸ್ಸು ಸಿಗಲಿಲ್ಲ. ಅದಲ್ಲದೇ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇವತ್ತಿಗೂ ಕೂಡ ನಟಿ ರಮ್ಯಾರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ರಾಒನ್ ಪವನ್ ನಟಿ ರಮ್ಯಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೂ ಸರಳವಾಗಿರುವ ನಟಿಯ ಈ ವಿಡಿಯೋವೊಂದು ವೈರಲ್ ಆಗಿದ್ದು, ಫ್ಯಾನ್ಸ್ ಗೆ ಈ ವಿಡಿಯೋ ಇಷ್ಟವಾಗಿದೆ.

ಇತ್ತೀಚೆಗಷ್ಟೇ ನಟಿ ರಮ್ಯಾರವರು ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Sisan 5) ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆಯಲ್ಲಿ ನಟಿ ರಮ್ಯಾರವರು ತಮ್ಮ ರಾಜಕೀಯ ದಿನಗಳನ್ನು ನೆನಪಿಸಿಕೊಂಡಿದ್ದರು. ವೇದಿಕೆಯ ಮೇಲೆ ಮಾತನಾಡಿದ್ದ ರಮ್ಯಾ, ” ತಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕವಾಗಿದ್ದು, ನಾನು ರಾಜಕೀಯಕ್ಕೆ ಎಂಟ್ರಿಯಾದ ಸಮಯದಲ್ಲಿಯೇ ನನ್ನ ತಂದೆ ತೀರಿಕೊಂಡರು. ಅದು ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅದಾದ ಬಳಿಕ ನಾನು ಚುನಾವಣೆಯಲ್ಲಿ ಸೋತೆ ಅದು ನನ್ನ ಪಾಲಿಗೆ ಬಹಳ ಕಷ್ಟದ ಸಮಯ. ನನ್ನ ತಂದೆ ಹೋದ ಸಮಯದಲ್ಲಿ ಅಂತೂ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ” ಎಂದಿದ್ದರು.

“ಆದರೆ ಆ ಸಮಯದಲ್ಲಿ ರಾಹುಲ್ ಗಾಂಧಿ ಜೀ ಅವರು ನನಗೆ ಬಹಳ ಸಹಾಯ ಮಾಡಿದರು. ನನ್ನಲ್ಲಿ ಹೊಸ ಚೈತನ್ಯ ತುಂಬುವ ಯತ್ನ ಮಾಡಿದರು. ಹುಟ್ಟು-ಸಾವುಗಳ ಬಗ್ಗೆ ತಿಳಿಸಿಕೊಟ್ಟರು. ನಮ್ಮ ಜೀವನದ ಉದ್ದೇಶದ ಬಗ್ಗೆ ಪಾಠ ಮಾಡಿದರು. ನನ್ನ ಜೀವನದಲ್ಲಿ ನನ್ನ ತಾಯಿ, ತಂದೆಯ ಬಳಿಕ ನನ್ನ ಮೇಲೆ ಅತಿಯಾಗಿ ಪ್ರಭಾವ ಬೀರಿದ ವ್ಯಕ್ತಿ ರಾಹುಲ್ ಗಾಂಧಿ” ಎಂದು ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

 

View this post on Instagram

 

A post shared by Raone Pavan (@raone_pavan)

“ನಾನು ಮೊದಲು ಪಾರ್ಲಿಮೆಂಟ್‌ಗೆ ಹೋದಾಗ ನನಗೆ ಏನೂ ಗೊತ್ತಿರಲಿಲ್ಲ. ನಾನು ಕಲಿತೆ, ಇದಕ್ಕೆ ಮಂಡ್ಯ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಮಂಡ್ಯ ಜನರು ಇಲ್ಲ ಅಂದಿದ್ರೆ ನನಗೆ ಆ ಧೈರ್ಯ ಬರ್ತಿರಲಿಲ್ಲ. ಪೊಲಿಟಿಕಲ್ ಕಮ್ಯುನಿಕೇಶನ್ ತುಂಬಾ ಕಷ್ಟ. ಮನನರಂಜನೆ ತುಂಬಾ ಸುಲಭ‌. ನ್ಯೂಸ್ ಹಿಂದೆ ಬೀಳುವುದು ಕಷ್ಟ. ನಾವು 24*7 ನ್ಯೂಸ್ ಚಾನೆಲ್ ಥರಾ ಕೆಲಸ ಮಾಡುತ್ತಿದ್ದೆವು” ಎಂದು ಧನ್ಯವಾದಗಳನ್ನು ತಿಳಿಸಿದ್ದರು.

ತುಂಬಾ ವರ್ಷಗಳ ಗ್ಯಾಪ್ ನಂತರ ಸಿನಿಮಾರಂಗಕ್ಕೆ ಮರಳಿರುವ ನಟಿ ರಮ್ಯಾ ಡಾಲಿ ಧನಂಜಯ್ ಅವರ ಉತ್ತರಕಾಂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ನಟಿ ರಮ್ಯಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ. ರಮ್ಯಾ ನಿರ್ಮಾಣದ ಆಪಲ್ ಬಾಕ್ಸ್ ಸಂಸ್ಥೆಯಿಂದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣವಾಗುತ್ತಿದೆ. ಮೋಹಕ ತಾರೆ ರಮ್ಯಾ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸಿನಿ ರಂಗ ಹೇಗೆ ಕೈ ಹಿಡಿಯುತ್ತದೆ ಎನ್ನುವುದನ್ನು ಕಾದು ನೋಡಬೇಕು.

Advertisement