ಅಭಿಷೇಕ್ ಅಂಬರೀಶ್ (Abhishek Ambarish marriage)ತಾವು ಪ್ರೀತಿಸಿದ ಹುಡುಗಿ ಅವಿವ (aviva biddappa)ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಮದುವೆ ನಡೆದಿದೆ. ನೆನ್ನೆ ಮಾಣಿಕ್ಯ ಚಾಮರಾವ್ ವಜ್ರದಲ್ಲಿ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆದಿದ್ದು ಜೂನ್ ಏಳುಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿ ಆರತಾಕ್ಷತೆ(Abhishek ambrish reception) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಸಲಾಗಿದೆ.

 

 

ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್(rajnikant) ,ಮೋಹನ್ ಬಾಬು, ಯಶ್(yash) ,ಕಿಚ್ಚ ಸುದೀಪ್ (kiccha Sudeep), ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ಅನಿಲ್ ಕುಂಬಳೆ(Anil Kumble), ನರೇಶ್ ಪವಿತ್ರ ಲೋಕೇಶ್ ಸೇರಿದಂತೆ ಹಲವಾರು ಜನ ಮದುವೆಗೆ ಬಂದಿದ್ದರು.

 

 

ಅಭಿಷೇಕ ಅಂಬರೀಶ್ ಮದುವೆಗೆ (Abhishek Amrish wedding)ನಟಿ ಮೀನಾ(actress Meena) ಕೂಡ ಆಗಮಿಸಿ ವಧು ವರರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮೀನಾ ಒಬ್ಬ ಬಹುಭಾಷ ನಟಿಯಾಗಿದ್ದು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್(vishnuvardhan) ,ಅಂಬರೀಶ್(Ambarish) ಮುಂತಾದ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಮದುವೆಗೆ ಮೀನಾ ಕೂಡ ಆಗಮಿಸಿ ಶುಭ ಹಾರೈಸಿದ್ದಾರೆ.

Advertisement