ನಟ ದರ್ಶನ್ ಅವರು ಸ್ಯಾಂಡಲ್ ವುಡ್ ನ ಬಾರಿ ಬೇಡಿಕೆಯ ನಟನಾಗಿದ್ದರೂ ಎಲ್ಲಾ ನಟ ನಟಿಯರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಹೌದು, ಅದರಲ್ಲಿಯೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ತುಂಬಾನೇ ಆಪ್ತರು ಎನ್ನಬಹುದು. ಅಂಬರೀಶ್ ಅವರು ಇದ್ದಾಗಲೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಆ ಉತ್ತಮ ಸಂಬಂಧವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಅದಲ್ಲದೇ ರೆಬೆಲ್ ಸ್ಟಾರ್ ಕುಟುಂಬದ ಜೊತೆಗೆ ಇರುವ ಬಾಂಧವ್ಯದ ಬಗ್ಗೆ ದರ್ಶನ್ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ದರ್ಶನ್ ಅವರು ಸುಮಲತಾ (Sumalatha) ಅವರ ಮನೆಯ ಕಾರ್ಯಕ್ರಮ ಹಾಗೂ ಅಭಿಷೇಕ್ ಅಂಬರೀಶ್ ಅವರ ಸಿನಿಮಾ ಕಾರ್ಯಕ್ರಮದಲ್ಲಿಯೂ ಸದಾ ಮುಂದೆ ಇರುತ್ತಾರೆ. ಇದೀಗ ರೆಬೆಲ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ನಟ ದರ್ಶನ್ ಅವರ ವಿಶೇಷ ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ದರ್ಶನ್ ಹಾಗೂ ಅಭಿ ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕಿದ್ದಾರೆ. ಶೂಟ್ ಧರಿಸಿದ್ದ ಇಬ್ಬರೂ ಜ್ಯೂನಿಯರ್ ಹೇಳಪ್ಪ ಸೀನಿಯರ್ ಎನ್ನುವ ಹಾಡಿಗೆ ಡಾನ್ಸ್ ಮಾಡಿದ್ದು, ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ದರ್ಶನ್ ಹಾಗೂ ಅಭಿಷೇಕ್ ಅವರ ವೇದಿಕೆಯ ಮೇಲೆ ಸ್ಟೆಪ್ ಹಾಕಿರುವ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳು ಹರಿದು ಬಂದಿದೆ. ಅದಲ್ಲದೇ, ಅವಿವಾ ಬಿದ್ದಪ್ಪ (Aviva Biddappa) ಜೊತೆ ಅಭಿಷೇಕ್ ಅಂಬರೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ವೇಳೆಯಲ್ಲಿ ದರ್ಶನ್ ಬಂದು ಶುಭ ಹಾರೈಸಿದ್ದರು. ಕಳೆದ ಜೂನ್ 7ರಂದು ನಡೆದ ಆರತಕ್ಷತೆಗೆ ಬಿಳಿ ಶರ್ಟ್, ಬ್ರೌನ್ ಪ್ಯಾಂಟ್ ಧರಿಸಿ ದರ್ಶನ್ ಅವರು ಬಂದಿದ್ದರು.
Exclusive Video…
ಡಿಬಾಸ್ ಹಾಗೂ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ ಕ್ಯೂಟ್ ವಿಡಿಯೋ.👌❤️#DBoss @dasadarshan @sumalathaA pic.twitter.com/lWfmQUxbZE— CSF Ranebennur KA-68 (@boss_rnr_68) June 11, 2023
ಅಭಿ ಹಾಗೂ ಅವಿವಾ ಜೊತೆಗೆ ದರ್ಶನ್ ಫೋಟೊಗೆ ಪೋಸ್ ಕೊಟ್ಟಿದ್ದರು. ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರ ಕೆನ್ನೆ ಮುಟ್ಟಿ ತಮ್ಮ ಸಂತೋಷವನ್ನು ಹೊರಹಾಕಿದ್ದರು. ಅಭಿಷೇಕ್ ಪತ್ನಿ ಅವಿವಾಗೆ ದುಬಾರಿ ಬೆಲೆಯ ಡೈಮಂಡ್ ನೆಕ್ಲೆಸ್ (Daimond Necklece) ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ಎಲ್ಲವೂ ಕೂಡ ರೆಬೆಲ್ ಸ್ಟಾರ್ ಕುಟುಂಬದ ಜೊತೆಗೆ ದರ್ಶನ್ ಅವರ ಸಂಬಂಧ ಹೇಗಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತವೆ.