ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ನಟ ಅಭಿಷೇಕ್ ಅಂಬರೀಶ್ (Abhishek Ambarish) ದೀರ್ಘಕಾಲದ ಗೆಳತಿ ಅವಿವಾ ಬಿದ್ದಪ್ಪ (Aviva Biddappa) ಅವರನ್ನು ವರಿಸುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ,  ಕೆಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

ಬೆಂಗಳೂರಿ (Bengaluru) ನಲ್ಲಿ ಸೋಮವಾರ ಬೆಳಿಗ್ಗೆ ಬೆಳಗ್ಗೆ 9.30 ರಿಂದ 10.30ರೊಳಗಿನ ಶುಭ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್ ಅಂಬರೀಶ್ ಮಾಂಗಲ್ಯ ಧಾರಣೆಯೂ ನಡೆದಿದೆ. ಮದುವೆ ಎಲ್ಲಾ ಉಸ್ತುವಾರಿಯನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ವಹಿಸಿಕೊಂಡಿದ್ದಾರೆ.

ಒಕ್ಕಲಿಗ ಸಂಪ್ರದಾಯದಂತೆ ನಡೆದ ಮದುವೆ ನಡೆದಿದ್ದು, ರೆಬೆಲ್ ಸ್ಟಾರ್ ಪುತ್ರನ ಮದುವೆಯಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajanikanth), ನಟ ಯಶ್‌ (Yash), ನಟಿ ಸುಹಾಸಿನಿ (Suhasini), ಟಾಲಿವುಡ್‌ ನಟರಾದ ಮೋಹನ್‌ ಬಾಬು (Mohan Babu), ಮಂಚು ಮನೋಜ್‌ ( Manchu Manoj) , ನಟ ನರೇಶ್‌ (Naresh), ಪವಿತ್ರ (Pavitra), ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble), ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Raj kumar) ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಈ ವೇಳೆಯಲ್ಲಿ ನಗು ತರಿಸುವ ಘಟನೆಯೊಂದು ನಡೆದಿದೆ. ನವಜೋಡಿಗೆ ಗಿಫ್ಟ್ ಕೊಡುವುದನ್ನು ಮರೆತಿದ್ದು, ಈ ವೇಳೆಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಕೈಯಲ್ಲಿದ್ದ ಗಿಫ್ಟ್ ಅನ್ನು ತೆಗೆದುಕೊಂಡಿದ್ದಾರೆ. ತಕ್ಷಣವೇ ಅಭಿಷೇಕ್  ಅಂಬರೀಶ್  ಹಾಗೂ ಅವಿವಾ ಬಿದ್ದಪ್ಪ ಅಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

 

ಜೂನ್​ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ (Tripuravasi) ಯಲ್ಲಿ ಅದ್ದೂರಿಯಾಗಿ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ನಡೆಯಲಿದೆ. ಅದಲ್ಲದೇ, ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದ್ದು, ಬಾರಿ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿದೆ. ಪುತ್ರ ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Advertisement