ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ತಾನು ಪ್ರೀತಿಸಿರುವ ಹುಡುಗಿ ಅವಿವ ಬಿದ್ದಪ್ಪರವರನ್ನು ಕಳೆದ ವಾರ ಅಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು ನಂತರ ಭಾರತ ಆರತಾಕ್ಷತೆ, ಸಂಗೀತ ಕಾರ್ಯಕ್ರಮ, ಮದುವೆಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು ಈ ಕಾರ್ಯಕ್ರಮಗಳಿಗೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿ ವುಡ್ ನಿಂದ ಕೂಡ ಅಭಿಮಾನಿಗಳು ಆಗಮಿಸಿದ್ದರು.

 

 

ಬೆಂಗಳೂರಿನ ಅಂಬಿ ನಿವಾಸದಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಿಂದ ಜರುಗಿವೆ ಇದೀಗ ಅಂಬರೀಶ್ ಹುಟ್ಟೂರಾದ ಮಂಡ್ಯದ ಗೆಜ್ಜಲಗೆರೆಯಲ್ಲಿ ಬೀಗರೂಟ ಕಾರ್ಯಕ್ರಮವನ್ನು(Abhi Aviva Beegaroota) ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಗಟ್ಟಲೆ ಮಟನ್ ಹಾಗೂ ಚಿಕನ್ ಮಾಡುತ್ತಿದ್ದಾರೆ ಹಾಗೆ ಒಂದು ಲಕ್ಷ ಜನಕ್ಕೆ ಊಟವನ್ನೂ ಸುಮಲತಾ ಅಂಬರೀಶ್ ಹಾಕಿಸಿದ್ದಾರೆ .

 

 

ಜೂನ್ 5 ರಂದು ಬೆಂಗಳೂರು ಅರಮನೆ ಮೈದಾನದ ಮಾಣಿಕ್ಯ ವಜ್ರದಲ್ಲಿ ಅವಿವಾ ಹಾಗೂ ಅಭಿಷೇಕ ಅಂಬರೀಶ್ ಮದುವೆ ನಡೆಯಿತು ಈ ಮದುವೆಯಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್, ಮೋಹನ್ ಬಾಬು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಯಶ್, ಉಪೇಂದ್ರ ,ನರೇಶ್ ,ಪವಿತ್ರ ಲೋಕೇಶ್,ಸುಂದರ್ ರಾಜ್ ,ಅಶ್ವಿನಿ ಪುನೀತ್ ರಾಜಕುಮಾರ್ ,ಸಚಿವ ಮಧು ಬಂಗಾರಪ್ಪ ,ಅನಿಲ್ ಕುಂಬಳೆ, ಮುಂತಾದವರೆಲ್ಲ ಹಾಜರಿದ್ದರು ಇದೀಗ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಕುಟುಂಬದವರ ಸತ್ಯನಾರಾಯಣ ಪೂಜೆಯನ್ನು ಮಾಡಿಸಿದ್ದಾರೆ.

 

Advertisement