ರೆಬೆಲ್ ಅಂಬರೀಶ್ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಹತ್ತಿರ. ಅಂಬರೀಶ್ ಇದ್ದಾಗಿನಿಂದಲೂ ರೆಬೆಲ್ ಕುಟುಂಬದೊಂದಿಗೆ ದರ್ಶನ್ ಆತ್ಮೀಯ ಸಂಬಂಧ ಹೊಂದಿದ್ದರು. ಇದನ್ನು ಸ್ವತ: ಚಾಲೆಂಜಿಂಗ್ ಸ್ಟಾರ್ ಹಲವು ಬಾರಿ ಹೇಳಿಕೊಂಡಿದ್ದಾರೆ.

ಅಭಿಷೇಕ್ ಅಂಬರೀಶ್ ಅನ್ನು ದರ್ಶನ್ ತಮ್ಮ ಸಹೋದರನಂತೆ ಭಾವಿಸಿದ್ದಾರೆ. ಅಭಿಯ ಪ್ರತಿಯೊಂದು ಹಂತದಲ್ಲಿಯೂ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ. ಅಷ್ಟೇ ಯಾಕೆ, ಸುಮಲತಾ ಚುನಾವಣೆ ನಿಂತಾಗಲೂ ದರ್ಶನ್ ಮುಂದೆ ನಿಂತಿದ್ದರು.

Darshan gifted diamond neckles to Abhishek Ambareesh and Aviva Bidapa

ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಲೂ ದರ್ಶನ್ ಬಂದು ಶುಭ ಹಾರೈಸಿದ್ದಾರೆ. ಅಭಿ ವಿವಾಹಕ್ಕೆ ದರ್ಶನ್ ಕೊಟ್ಟ ಉಡುಗೊರೆಯೇನು? ಅನ್ನೋದು ಮಾತ್ರ ಸೀಕ್ರೆಟ್ ಆಗಿಯೇ ಇತ್ತು. ಅದೇನು? ಅದರ ಬೆಲೆ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಭಿ-ಅವಿವಾ ಆರತಕ್ಷತೆಯಲ್ಲಿ ದರ್ಶನ್

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹದ ದಿನ (ಜೂನ್ 5) ದರ್ಶನ್ ಗೈರಾಗಿದ್ದರು. ಆದರೆ, ಅವರ ಜಾಗದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಜರಿ ಹಾಕಿದ್ದರು. ಜೂನ್ 7ರಂದು ನಡೆದ ಆರತಕ್ಷತೆಗೆ ಬಿಳಿ ಶರ್ಟ್, ಬ್ರೌನ್ ಪ್ಯಾಂಟ್ ಧರಿಸಿ ದರ್ಶನ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.

Darshan gifted diamond neckles to Abhishek Ambareesh and Aviva Bidapa

ವೇದಿಕೆ ಏರಿ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಜೋಡಿಗೆ ಶುಭ ಕೋರಿದರು. ಈ ವೇಳೆ ನವ ಜೋಡಿ ಜತೆ ದರ್ಶನ್ ಫೋಟೊಗೆ ಪೋಸ್ ಕೊಟ್ಟಿದ್ದರು. ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರ ಕೆನ್ನೆ ಮುಟ್ಟಿ ಸಂತಸ ವ್ಯಕ್ತಪಡಿಸಿದ್ದರು. ಇದೇ ಅವಿವಾಗೆ ಉಡುಗೊರೆಯನ್ನು ನೋಡಿದ್ದರು.

ಅಭಿಷೇಕ್-ಅವಿವಾಗೆ ದರ್ಶನ್ ದುಬಾರಿ ಗಿಫ್ಟ್

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ರಿಸೆಪ್ಷನ್‌ಗೆ ಬಂದು ದರ್ಶನ್ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಅದರಲ್ಲೂ ರೆಬೆಲ್ ಮನೆಗೆ ಸೊಸೆಯಾಗಿ ಬಂದಿರೋ ಅವಿವಾಗೆ ದುಬಾರಿ ಬೆಲೆಯ ಡೈಮಂಡ್ ನೆಕ್ಲೆಸ್ ಉಡುಗೊರೆಯಾಗಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಅಭಿಷೇಕ್-ಅವಿವಾ ಜೋಡಿಗೆ ದರ್ಶನ್ ಕೊಟ್ಟಿರೋ ನೆಕ್ಲೆಸ್‌ನಲ್ಲಿ ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಡೈಮಂಡ್‌ ಇದೆ ಎನ್ನಲಾಗಿದೆ. ಅವಿವಾಗಂತಲೇ ದರ್ಶನ್ ಈ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಡೈಮಂಡ್ ನೆಕ್ಲೆಸ್ ಬೆಲೆ ಎಷ್ಟು?

ಚಾಲೆಂಜಿಂಗ್‌ ಸ್ಟಾರ್ ಕೊಟ್ಟಿರೋ ದುಬಾರಿ ಡೈಮಂಡ್ ನೆಕ್ಲೆಸ್ ಬೆಲೆ ಬರೋಬ್ಬರಿ 30 ಲಕ್ಷದಿಂದ 40 ಲಕ್ಷ ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಅಂಬಿ ಕುಟುಂಬದ ಆಪ್ತರಿಂದ ಸಿಕ್ಕಿರೋ ಮಾಹಿತಿ. ಈ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೆ ಕೊಟ್ಟಿಲ್ಲ.

ಅಂಬರೀಶ್ ಇದ್ದಗ ಹುಟ್ಟುಹಬ್ಬ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಇದ್ದಾಗ ದರ್ಶನ್ ದುಬಾರಿ ಉಡುಗೊರೆಯನ್ನು ಗಿಫ್ಟ್ ಮಾಡುತ್ತಿದ್ದರು. ಇತ್ತ ಅಂಬರೀಶ್ ಕೂಡ ಹಾಗೇ ಇದ್ದರು.

Advertisement