ರೆಬಲ್ ಸ್ಟಾರ್ ಅಂಬರೀಶ್ (Rebel Star Ambarish) ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಜೂನ್ 5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾವು ಪ್ರೀತಿಸಿದ ಹುಡುಗಿ ಅವಿವಾ (Aviva) ಜೊತೆ ಸಪ್ತಪದಿ ತುಳಿದಿದ್ದು, ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇತ್ತ ನಟ ಅಭಿಷೇಕ್ ಅವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರವು ಅದ್ದೂರಿಯಾಗಿ ನಡೆದಿತ್ತು.

ರೆಬೆಲ್ ಸ್ಟಾರ್ ಪುತ್ರನ ಮದುವೆ, ಆರತಕ್ಷತೆ ಕಾರ್ಯಕ್ರಮದ ನಂತರ ಅದ್ಧೂರಿ ಸಂಗೀತ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹೌದು, ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಸಾದ್ ಬಿದ್ದಪ್ಪ (Prasad Biddappa) ಆಪ್ತರಿಗಾಗಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ದರ್ಶನ್ (Darshan), ಯಶ್ (Yash), ರಮ್ಯಾಕೃಷ್ಣ (Ramyakrishna), ಮಾಲಾಶ್ರೀ (Malashree), ಗುರುಕಿರಣ್ (Gurukiran), ಜಯಪ್ರದಾ (Jayapradaa) , ಶಿವರಾಜ್ ಕುಮಾರ್ (Shivaraj Kumar), ಪ್ರಭುದೇವಾ (Prabhudevaa) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಅವರ ಸಂಗೀತ್ ಪಾರ್ಟಿಯಲ್ಲಿ . ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಅಂಬರೀಶ್ (Sumalatha Ambarish) ಜೊತೆ ಸೇರಿ ಡಾನ್ಸ್ ಮಾಡಿದ್ದಾರೆ. ಅದಲ್ಲದೇ, ಅಣ್ಣಾವ್ರ ಹಿಟ್ ಸಾಂಗ್ಸ್‌ಗೆ ಅಭಿಷೇಕ್, ತಾಯಿ ಸುಮಲತಾ ಜೊತೆ ಸ್ಟೆಪ್ ಹಾಕಿದ್ದಾರೆ. ಇತ್ತ ಜೂನಿಯರ್, ಸೀನಿಯರ್ ಎಂದು ದರ್ಶನ್- ಅಭಿಷೇಕ್ ಅವರ ಡಾನ್ಸ್ ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು. ಇವರ ಜೊತೆಗೆ ಮಾಲಾಶ್ರೀ, ರಮ್ಯಾಕೃಷ್ಣ ಕೂಡ ಸಾಥ್ ನೀಡಿದ್ದು ವಿಶೇಷ ಎನ್ನಬಹುದು.

ನಟ ದರ್ಶನ್ (Darshan) ಅವರು ನವ ಜೋಡಿಗೆ ಕಿವಿ ಮಾತು ಹೇಳಿದ್ದು ಅಂಬಿ ರೀತಿಯ ತಂದೆ ಸಿಗೋಕೆ ಯಾರಿಗೂ ಸಾಧ್ಯವಿಲ್ಲ. ಆ ಫ್ಯಾಮಿಲಿಗೆ ನೀನು ಹೋಗ್ತಿದ್ದಿಯಾ, ಎಲ್ಲಾ ಹೊಣೆ ನಿನ್ನದೇ, ನಮ್ಮ ಮನೆಯಲ್ಲಿ ಏನೇ ತೊಂದರೆಯಾದರೂ ಚೆನ್ನಾಗಿರಲ್ಲ. ಇನ್ನು ನನ್ನ ಕಳಕಳಿಯ ಮನವಿ. ಅಭಿ ಏನಾದರೂ ತಪ್ಪುಯ ಮಾಡಿದರೆ ನನಗೆ ಹೇಳು, ನಾನು ನೋಡಿಕೊಳ್ತೀನಿ. ಅಂಬರೀಶ್ ಎನ್ನುವ ಹೆಸರಿಗೆ ಯಾವತ್ತು ಧಕ್ಕೆ ತರಬೇಡ” ಎಂದು ಅವಿವಾ ಬಳಿ ಮಂಡಿಯೂರಿ ಕೇಳಿಕೊಂಡಿದ್ದಾರೆ.

ನಂತರದಲ್ಲಿ ಯಶ್ ಮೈಕ್ ತೆಗೆದುಕೊಂಡಿದ್ದು, ಅಭಿ, ಅವಿವಾ ಇಬ್ಬರನ್ನು ಬಳಿಗೆ ಕರೆದು “ದರ್ಶನ್ ಸರ್, ನಮ್ಮ ಹುಡುಗಿಗೆ ಹೇಳಿದರು, ಆದರೆ ಮೊದಲು ನಿನಗೆ ಹೇಳಬೇಕು. ಹೇಯ್, ನಮ್ಮ ಮನೆಗೆ ಒಂದು ಹುಡುಗಿ ಬಂದಿದೆ. ಲಕ್ಷ್ಮಿ ಬಂದಿದೆ. ನೋಡಮ್ಮ ನೀನು ಏನೇ ಮಾಡಿದರು, ನಿನ್ನ ತಪ್ಪಿರಲ್ಲ, ಇವನದ್ದೇ ತಪ್ಪು. ಅದು ನಮ್ಮ ಗ್ಯಾರೆಂಟಿ. ಮೊದಲು ನಿನಗೆ ಹೇಳಬೇಕು” ಎಂದು ಅಭಿಷೇಕ್ ಗೆ ಯಶ್ ಹೇಳಿದ್ದಾರೆ.

ಅಭಿನ ಕರೆದು ಯಶ್ ಮಾತನಾಡುತ್ತಿದ್ದಂತೆ ಮತ್ತೆ ಮೈಕ್ ಕಿತ್ತುಕೊಂಡ ದರ್ಶನ್ “ಮನೆ ನಡೆಸೋದು ಹುಡುಗಿ. ಅಭಿನ ನಾವು ನೋಡಿಕೊಳ್ಳೋಣ ಬಿಡಿ ಎಂದರು. ನಂತರ ಯಶ್ ಮೈಕ್ ತೆಗೆದುಕೊಂಡು ಅಭಿಗೆ “ನೀನು ಎಲ್ಲೇ ಹೋದರು ಮನೆಗೆ ಬರಬೇಕು ಅಷ್ಟೇ ಸಲಹೆ” ಎಂದು ಹೇಳಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ’ ( Ambi Ninge Vayassaaytu) ಚಿತ್ರದ ‘ಹೇ ಜಲೀಲ’ ಹಾಡಿಗೆ ಯಶ್, ದರ್ಶನ್, ಸುಮಲತಾ ಅಂಬರೀಶ್ ಹಾಕಿದ್ದಾರೆ.

ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದಲ್ಲದೆ ಅಭಿಷೇಕ್ ಅವರ ಮದುವೆಯ ಸಂಭ್ರಮವು ಇನ್ನು ಮುಗಿದಿಲ್ಲ. ಹೌದು, ಜೂನ್ 16ಕ್ಕೆ ಮಂಡ್ಯದಲ್ಲಿ ಅಭಿಮಾನಿಗಳಿಗಾಗಿ ಬೀಗರೂಟ ಆಯೋಜನೆ ಮಾಡಲಾಗಿದೆ. ಈ ಬೀಗರೂಟದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಲಿದ್ದಾರೆ ಎನ್ನಲಾಗಿದೆ.

Advertisement