Actor Yash new car collection range rover : ನಟ ಯಶ್​ (Yash) ಅವರು ಕೇವಲ ಸ್ಯಾಂಡಲ್​ವುಡ್​ ಗೆ ಮಾತ್ರ ಸೀಮಿತವಾಗಿರದೇ ಫ್ಯಾನ್ಸ್ ಇಂಡಿಯಾ ಸ್ಟಾರ್ (Pan India Star) ಆಗಿದ್ದಾರೆ. ಹೌದು ಕೆಜಿಎಫ್ 2 (KGF 2) ಸಿನಿಮಾದ ಬಳಿಕ ಯಶ್ ಅವರ ಬೇಡಿಕೆ ಹೆಚ್ಚಾಗಿದೆ. ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದ ಯಶ್ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ನಟ ಯಶ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಐಷಾರಾಮಿ ಕಾರಿನ ಒಡೆಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಯಶ್ ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದಾರೆ. ಯಶ್ ಅವರು ರೇಂಜ್​ ರೋವರ್ (Range Rover) ಕಾರು ಕಪ್ಪು ಬಣ್ಣದ ಕಾರನ್ನು ಖರೀದಿಸಿದ್ದಾರೆ.

Actor Yash new car collection range rover

ಕಾರು ಖರೀದಿಸಿರುವ ಯಶ್ ಪತ್ನಿ ರಾಧಿಕಾ (Radhika) ಹಾಗೂ ಮುದ್ದಿನ ಮಕ್ಕಳಾದ ಆರ್ಯಾ (Arya) ಹಾಗೂ ಯಥರ್ವ್ (Yatharv)ಜೊತೆ ಸುತ್ತಾಡಿದ್ದಾರೆ. ಯಶ್ ಬ್ರೌನ್ ಕಲರ್ ಪ್ಯಾಂಟ್ ಹಾಗೂ ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದು, ರಾಧಿಕಾ ಪಂಡಿತ್ ಅವರು ತಿಳಿ ಬಣ್ಣದ ಕುರ್ತಾ ಧರಿಸಿದ್ದರು. ಹೊಸ ಕಾರಿಗೆ ಹೂವಿನ ಹಾರ ಹಾಕಿ ಶೀಗಂಧವನ್ನು ಹಚ್ಚಿದ್ದು, ಕಾರಿನ ಮುಂದೆ ಪೋಸ್ ಕೊಟ್ಟಿದ್ದಾರೆ.

ಯಶ್ ಅವರು ಖರೀದಿಸಿರುವ ಹೊಸ ಕಾರಿನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಯಶ್ ಅವರು ಖರೀದಿಸಿರುವ ಐಷಾರಾಮಿ ಕಾರಿನ ಬೆಲೆ ಸದ್ಯಕ್ಕೆ ಚರ್ಚೆಯಾಗುತ್ತಿದೆ. ಫ್ಯಾನ್ಸ್ ಈ ಕಾರಿನ ಬೆಲೆ ಎಷ್ಟಿದೆ ಎಂದು ಹುಡುಕುತ್ತಿದ್ದಾರೆ. ಈಝೀ ಸಿಟ್ಟಿಂಗ್, ಏಸಿ, ಕಂಫರ್ಟರ್ ಆಪ್ಶನ್​ ಗಳು ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಈ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ ಎನ್ನಲಾಗಿದೆ.

ಯಶ್​ ಅವರು 19ನೇ ಸಿನಿಮಾ ಅನೌನ್ಸ್​ ಮಾಡುವುದು ಬಾಕಿ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಬಳಿಕ ಅವರು ಹೊಸ ಸಿನಿಮಾ ಘೋಷಿಸಿಲ್ಲ. ಆದಷ್ಟು ಬೇಗ ಈ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಕಾಯುತ್ತಿದ್ದಾರೆ. ಕೆಜಿಎಫ್ ನಟ ಯಶ್ ರಾವಣನ ಪಾತ್ರಕ್ಕೆ ಆಫರ್ ಬಂದಿದೆ ಎಂಬ ಮಾತುಗಳು ಕೇಳಿಬಂದಿತ್ತು.ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿರುವುದರಿಂದ, ಯಶ್ ರಾವಣ ಪಾತ್ರಕ್ಕೆ ಬಗ್ಗೆ ಯೋಚಿಸಿದ್ದರು. ಆದರೆ ಈ ಪಾತ್ರವನ್ನು ರಿಜೆಕ್ಟ್ ಮಾಡಿದ್ದರು ಎನ್ನಲಾಗಿತ್ತು.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನದಲ್ಲಿ ಮಾತಾಡಿದ್ದ ಯಶ್, ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ತುಂಬಾ ಜಾಗರೂಕರಾಗಿರಬೇಕು. ತುಂಬಾ ಭಾವುಕರಾಗಿದ್ದಾರೆ ಮತ್ತು ನಾನು ಅವರ ಇಚ್ಛೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದಿದ್ದಾರೆ. ಯಶ್ ನೆಗೆಟಿವ್ ಪಾತ್ರದಲ್ಲಿ ನಟಿಸುವುದನ್ನು ನೋಡಿ ಅವರ ಅಭಿಮಾನಿಗಳು ಇಷ್ಟಪಡುವುದಿಲ್ಲ ಎಂದಿದ್ದರು. ಹೀಗಾಗಿ ಅಭಿಮಾನಿಗಳ ಮನಸ್ಸಿಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಈ ರೀತಿಯಾಗಿ ನಿರ್ಧಾರ ಮಾಡಿದ್ದರು. ಯಶ್ ಅವರು ತನ್ನ 19 ನೇ ಸಿನಿಮಾವನ್ನು ಯಾವಾಗ ಘೋಷಣೆ ಮಾಡುತ್ತಾರೆ ಎಂದು ಕಾದು ನೋಡಬೇಕು.

Advertisement