ಸೋಶಿಯಲ್ ಮೀಡಿಯಾಗಳು ಎಂದರೆ ಸಾಕು ಯುವಕ ಯುವತಿಯರ ಕಿವಿ ನೆಟ್ಟಗಾಗುತ್ತದೆ. ಸೋಶಿಯಲ್ ಮೀಡಿಯಾ (Social Media) ಗಳು ಅನೇಕರಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎನ್ನುವುದನ್ನು ಒತ್ತಿ ಒತ್ತಿ ಹೇಳಬೇಕಾಗಿಲ್ಲ. ಹೌದು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸಿದವರು ಇದ್ದಾರೆ. ಅನೇಕರು ಈ ಸಾಮಾಜಿಕ ಜಾಲತಾಣಗಳ ಮೂಲಕ ಸೆಲೆಬ್ರೆಟಿಗಳ ಪಟ್ಟಿಗೆ ಸೇರಿದ್ದಾರೆ.

ಈ ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆ ಫ್ಯಾನ್ಸ್ ಫಾಲ್ಲೋರ್ಸ್ (Fan Followers) ಹುಟ್ಟಿಕೊಂಡರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬಂದು ಬಿಡುತ್ತವೆ.ಈಗಾಗಲೇ ಈ ಸೋಶಿಯಲ್ ಮೀಡಿಯಾದ ಮೂಲಕ ಹಣ ಸಂಪಾದನೆ ಮಾಡುವವರು ಅಧಿಕ ಜನರಿದ್ದಾರೆ. ಅದರಲ್ಲಿಯೂ ಈ ಯೂಟ್ಯೂಬರ್ ಗಳಿಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದೇ ಕೆಲಸವಾಗಿರುತ್ತದೆ. ಅಂತಹವರಲ್ಲಿ ಡಾಕ್ಟರ್ ಬ್ರೋ (Dr bro ) ಎನ್ನುವ ಯೂಟ್ಯೂಬರ್ (Youtuber) ಕೂಡ ಒಬ್ಬರು. ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾ ಜನಪ್ರಿಯತೆಯನ್ನು ಗಳಿಸಿಕೊಳ್ಳುವ ಇವರಿಗೆ ದೊಡ್ಡ ಫ್ಯಾನ್ಸ್ ಬಳಗವಿದೆ.

ಇದೀಗ ಹೊಸ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋದಲ್ಲಿ ಡಾಕ್ಟರ್ ಬ್ರೋರವರು ಚಂದನವನದ ನಟರ ಜೊತೆಗೆ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡು,”ನನ್ ತುಂಬ ಚಿಕ್ಕಂದಿನಿಂದ ಇವರು ಯಲ್ಲರನು ನೋಡ್ತದೆ. ಇಂದು ಅಚಾನಕ್ಕಾಗಿ ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ” ಎಂದು ಬರೆದುಕೊಂಡಿದ್ದಾರೆ.

ಈ ಫೋಟೋದಲ್ಲಿ ಡಾರ್ಲಿಂಗ್ ಕೃಷ್ಣ ( Darling Krishana), ಡಾಲಿ ಧನಂಜಯ್ (Dali Dhananjay), ಲೂಸ್ ಮಾದ ಯೋಗೀಶ್ (Lose Mada Yogish), ಸತೀಶ್ ನಿನಾಸಂ( Sathish Ninaasam), ವಾಸುಕಿ ವೈಭವ್ (Vasuki Vaibhav), ಪನ್ನಾಗಭರಣ (Pannagabharana) ಸೇರಿದಂತೆ ಇನ್ನೂ ಅನೇಕರನ್ನು ಕಾಣಬಹುದು..

ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಒಂದೇ ದಿನದಲ್ಲಿ ನಾಲ್ಕುವರೆ ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.ಬ್ರೋ (dr bro ) ಎಂದೇ ಖ್ಯಾತಿ ಗಳಿಸಿರುವ ಇವರ ಹಿನ್ನಲೆಯನ್ನು ಗಮನಿಸಿದರೆ, ಇವರ ನಿಜವಾದ ಹೆಸರು ಗಗನ್ ಶ್ರೀನಿವಾಸ್ (Gagan Shreenivas).

ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಇವರ ಫ್ಯಾನ್ಸ್ ಫಾಲ್ಲೋರ್ಸ್ ಗಳಿಗೇನು ಕೊರತೆಯಿಲ್ಲ. ದೇಶ-ವಿದೇಶಗಳನ್ನು ಸುತ್ತುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ಮಾತನಾಡುತ್ತಾ ಫೇಮಸ್ ಆಗಿದ್ದಾರೆ.. ಈ ಡಾ ಬ್ರೋ ಎನ್ನುವ ಈ ಹುಡುಗನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ.

Advertisement