ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ದೊಡ್ಡ ಅಭಿಮಾನಿ ಬಳಗವಿದೆ ನೆಚ್ಚಿನ ನಟನಿಗಾಗಿ ಕನವರಿಸುವ ಸಾಕಷ್ಟು ಜೀವಗಳು ಇವೆ ದರ್ಶನ್ ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಪ್ರತಿದಿನ ರಾಜರಾಜೇಶ್ವರಿ ನಗರದ ನಿವಾಸದ ಬಳಿ ನೂರಾರು ಅಭಿಮಾನಿಗಳು ದರ್ಶನ್ ಗಾಗಿ ಕಾದು ನಿಂತಿರುತ್ತಾರೆ ದರ್ಶನ್ ದಿನ ಅವರನ್ನು ಭೇಟಿ ಮಾಡುತ್ತಾರೆ.

 

 

ಶಿವಮೊಗ್ಗದ ದರ್ಶನ್ ಅಭಿಮಾನಿ ಒಬ್ಬರು ಹದಿನಾಲ್ಕು ವರ್ಷದಿಂದ ದರ್ಶನ್ ರವರನ್ನು ನೋಡಲು ಕಾಯುತ್ತಿದ್ದರು ಅವರ ಹೆಸರು ಸುಧೀರ್ ಆರನೇ ತರಗತಿಯಿಂದಲೂ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನವನ್ನು ಬೆಳೆಸಿಕೊಂಡಿದ್ದ ಸುಧೀರ್ ಒಮ್ಮೆಯಾದರೂ ದರ್ಶನ್ ಅವರನ್ನು ನೋಡಬೇಕು ಎಂದು ಆಸೆ ಪಡುತ್ತಿದ್ದರು.

 

 

ಸುಧೀರ್ ದರ್ಶನ ರವರನ್ನು ನೋಡಲು ಸಾಕಷ್ಟು ಬಾರಿ ಪ್ರಯತ್ನ ನಡೆಸಿದರು ಕೂಡ ಅದು ಫಲಿಸಿರಲ್ಲ ಇದೀಗ ಆ ಗಳಿಗೆ ನಿಜವಾಗಿದೆ ಇತ್ತೀಚೆಗೆ ದರ್ಶನ್ ನಾಗರಹೊಳೆಗೆ ಪ್ರವಾಸ ಕೈಗೊಂಡಿದ್ದಾರೆ ನಟ ದರ್ಶನ್ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ ಅಭಿಮಾನಿ ದರ್ಶನ್ ರವರನ್ನು ನೋಡಿ ಖುಷಿಪಟ್ಟಿದ್ದಾರೆ.

 

 

ಇಷ್ಟೇ ಅಲ್ಲದೆ ಸುದೀಪ್ ಎನ್ನುವ ಅಭಿಮಾನಿ ಕೂಡ ದರ್ಶನ್ ರವರನ್ನು ನೋಡಲು ಹಲವಾರು ವರ್ಷಗಳಿಂದ ಕಷ್ಟಗಳನ್ನು ಪಟ್ಟು ದರ್ಶನ್ ರವರನ್ನು ನೋಡಲು ಹುಡುಕಿಕೊಂಡು ಬರುತ್ತಿದ್ದರು ಆದರೆ ಅದು ಸಾಧ್ಯವಾಗಿರಲಿಲ್ಲ ಸುದೀಪ್ ಎನ್ನುವ ದರ್ಶನ್ ಅಭಿಮಾನಿಗಳು ಕೂಡ ಚಿಕ್ಕವಯಸ್ಸಿನಿಂದಲೂ ದರ್ಶನ್ ರವರು ಎಂದರೆ ತುಂಬಾ ಇಷ್ಟ.

 

 

ಇದ್ದಕ್ಕಿದ್ದಂತೆ ದರ್ಶನ ಅವರನ್ನು ನೋಡುತ್ತೇನೆ ಎಂದು ಹೇಳಿ ಬಟ್ಟೆ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದನಂತೆ ಬಸ್ಸು ರೈಲು ಹತ್ತಿ ಬೆಂಗಳೂರಿಗೆ ಬರುತ್ತಿದ್ದನಂತೆ ದರ್ಶನ್ ಬೇಟಿ ಸಾಧ್ಯವಾಗದೆ ವಾಪಸ್ ಹೋಗಿದ್ದು ಹಲವು ಬಾರಿ ದರ್ಶನ್ ನೋಡಲು ಹೋಗುತ್ತಿರುವ ವೇಳೆ ಸುದೀಪ್ ಗೆ ಆಕ್ಸಿಡೆಂಟ್ ಆಗಿ ಕಾಲನ್ನು ಕಳೆದುಕೊಂಡಿದ್ದಾನೆ.

 

 

ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಪ್ರಯೋಜನವಾಗದೆ ಯೂಟ್ಯೂಬ್ನಲ್ಲಿ ಸುದೀಪ್ ಹಾಗೂ ಅವರ ತಾಯಿ ದರ್ಶನ್ ರವರನ್ನು ನೋಡಬೇಕೆಂದು ಬೇಡಿಕೊಂಡಿದ್ದರು ದರ್ಶನ್ ಈಗ ಅವರ ಅಭಿಮಾನಿಯನ್ನು ಭೇಟಿಯಾಗಿದ್ದಾರೆ ಈ ರೀತಿ ನನ್ನನ್ನು ನೋಡಬೇಕು ಎಂದು ಎದ್ದು ಬಿದ್ದು ಬರಬೇಡಿ ನಿಮ್ಮ ಪ್ರಾಣದ ಮೇಲೆ ನಿಮಗೆ ಎಚ್ಚರವಿರಲಿ ಎಂದು ಅಭಿಮಾನಿಗಳಿಗೆ ದರ್ಶನ್ ಕಿವಿ ಮಾತನ್ನು ಹೇಳಿದ್ದಾರೆ. ದರ್ಶನ್ ರವರ ಈ ಗುಣವನ್ನು ಕಂಡು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Advertisement