ನಟ ದರ್ಶನ್ ಹಾಗೂ ಯಶ್ (Darshan Yash)ನಡುವೆ ಬಾಂಧವ್ಯ ಸರಿ ಇಲ್ಲ ಸ್ಟಾರ್ ವಾರ್ ನಡೆಯುತ್ತಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು ಆದರೆ ಯಶ್ ಹಾಗೂ ಡಿ ಬಾಸ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯ (Abhishek wedding party)ಸಂಗೀತ ಪಾರ್ಟಿಯಲ್ಲಿ ಕೈ ಕೈ ಹಿಡಿದು ಕುಣಿದಿದ್ದಾರೆ. ಅವರಿಬ್ಬರ ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

 

ಸ್ಯಾಂಡಲ್ ವುಡ್ ಜೋಡೆತ್ತು ಯಶ್ ಹಾಗು ದರ್ಶನ್ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ರವರ ಪರವಾಗಿ ಪ್ರಚಾರ ಮಾಡಿದ್ದರು ಈ ಜೋಡಿದ ಅಬ್ಬರದಿಂದಾಗಿ ಸುಮಲತಾ ಸಂಸದೆಯಾಗಿ ಆಯ್ಕೆಯಾದರು ಅಂದಿನಿಂದ ದರ್ಶನ್ ಹಾಗೂ ಯಶ್ ಒಟ್ಟಿಗೆ ಕಾಣಿಸಿಕೊಂಡಾಗ ಅಭಿಮಾನಿಗಳ ಬಾಯಲ್ಲಿ ಜೋಡೆತ್ತು ಎನ್ನುವ ಪದ ಕೇಳಿ ಬರುತ್ತೆ.

 

 

ಇದೀಗ ಈ ಜೋಡೆತ್ತುಗಳು ಅಭಿಷೇಕ್ ಹಾಗು ಅವಿವ ಮದುವೆ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಡಿ ಕುಣಿದು ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್(Shiva Rajkumar) ಈಗಲೂ ಸಹ ಅಪ್ಪುವನ್ನು ಕಳೆದುಕೊಂಡು ತುಂಬಾ ದುಃಖ ಪಡುತ್ತಿದ್ದಾರೆ. ಆದರೂ ಕೂಡ ಅಭಿಷೇಕ್ ಅವಿವಾ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ಹಾಗೆ ಸಂಗೀತ ಕಾರ್ಯಕ್ರಮಕ್ಕೂ ಬಂದು ಸಕ್ಕತ್ ಎಂಜಾಯ್ ಮಾಡಿದ್ದಾರೆ.

ಸಂಗೀತ ಕಾರ್ಯಕ್ರಮದಲ್ಲಿ ಕೈ ಕೈ ಹಿಡಿದು ಕುಣಿಯುತ್ತಿದ್ದ ದರ್ಶನ್ ಹಾಗೂ ಯಶ್ (Yash Darshan dance)ರವರನ್ನು ನೋಡಿ ಈಗ ಅಪ್ಪು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಯಾವುದೇ ಸಮಾರಂಭವಿದ್ದರೂ ಅಪ್ಪು(puneeth Rajkumar) ತಪ್ಪದೇ ಹಾಜರಿರುತ್ತಿದ್ದ ಅದರಲ್ಲೂ ಇಂತಹ ಡ್ಯಾನ್ಸ್ ಕಾರ್ಯಕ್ರಮಕ್ಕೆ ತಪ್ಪದೇ ಬರುತ್ತಿದ್ದ ಯಶ್ ಹಾಗೂ ದರ್ಶನ್ ಅವರಲ್ಲಿ ನಾನು ಅಪ್ಪುವನ್ನು (Appu)ಕಾಣುತ್ತೇನೆ ಎಲ್ಲರೂ ಈ ರೀತಿ ಬಾಂಧವ್ಯದಿಂದ ಇತರೆ ಚಿತ್ರರಂಗ ಕೂಡ ಚೆನ್ನಾಗಿ ಬೆಳೆಯಲು ಸಾಧ್ಯ ಎನ್ನುವ ಮಾತನ್ನು ಶಿವಣ್ಣ ಹೇಳಿದ್ದಾರೆ.

Advertisement