ಮಗಳು ಬದುಕಿರುವಾಗಲೇ ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿ ತಿಥಿ ಕಾರ್ಡ್ ಹಂಚಿ ತಿಥಿ ಊಟ ಹಾಕಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಬಜಲ್ಪುರದಲ್ಲಿ ನಡೆದಿದೆ. ಈ ಘಟನೆಯ ಹಿನ್ನೆಲೆ ನೋಡುವುದಾದರೆ ಮಗಳು ಅನ್ಯ ಧರ್ಮೀಯ ಯುವಕನನ್ನು ಮದುವೆ ಆಗಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಈ ವಿಷಯ ಬಾರಿ ಚರ್ಚೆ ಆಗುತ್ತಿದೆ.

ಮಧ್ಯಪ್ರದೇಶದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕುಟುಂಬ ನರ್ಮದ ನದಿಯ ಗ್ವಾರಿಘಾಟ್ ಅಲ್ಲಿ ಅಂತ್ಯಸಂಸ್ಕಾರದ ನಂತರದ ಕಾರ್ಯಗಳನ್ನು ಮುಗಿಸಿ ಮಗಳು ಜೀವಂತ ಇರುವಾಗಲೇ ಅವಳ ಹೆಸರಿನಲ್ಲಿ ಪಿಂಡ ಕೂಡ ಇಟ್ಟಿದ್ದಾರೆ. ಜೊತೆಗೆ ಇವರು ಮಗಳ ತಿಥಿ ಕಾರ್ಡ್ ಎಂದು ಪ್ರಿಂಟ್ ಮಾಡಿದ್ದ ಆ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ತಿಥಿ ಕಾರ್ಡ್ ಅಲ್ಲಿ ಮಗಳನ್ನು ಕುಪುತ್ರಿ ಮತ್ತು ನರಕವಾಸಿ ಎಂದೆಲ್ಲಾ ಅವರು ಕರೆದಿದ್ದಾರೆ. ಜೊತೆಗೆ ಇದನ್ನು ಎಲ್ಲೆಡೆ ಹಂಚಿ ಆಕೆಯ ಆತ್ಮಕ್ಕೆ ಶಾಂತಿ ಕೋರುವಂತೆ ಕೇಳಿದ್ದಾರೆ. ಅನಾಮಿಕ ದುಬೆ ಎನ್ನುವ ಹೆಸರಿನ ದುರ್ದೈವಿ ಬದುಕಿರುವಾಗಲೇ ಪೋಷಕರಿಂದ ತಿಥಿ ಮಾಡಿಸಿಕೊಂಡಿರುವ ಮಗಳು. ಜನವರಿ 2ರಂದು ಮನೆ ಬಿಟ್ಟು ಹೋಗಿದ್ದ ಏಕೆ ಜನವರಿ 4ರಂದು ಮುಸ್ಲಿಂ ಯುವಕನೋರ್ವನನ್ನು ವಿವಾಹ ಆಗಿದ್ದರು.

ಈ ವಿಷಯ ತಿಳಿದ ಪೋಷಕರು ಬಜಲ್ಪುರದ ಎಸ್ ಪಿ ಕಚೇರಿ ಮುಂದೆ ಗಲಾಟೆ ಮಾಡಿದ್ದರು. ಹಿಂದೂ ಸಂಘಟನೆಗಳು ಕೂಡ ಇದಕ್ಕೆ ಸಾಥ್ ನೀಡಿದ್ದವು. ಆದರೆ ಪೋಷಕರ ಒಪ್ಪಿಗೆ ಜೊತೆಗೆ ಮದುವೆ ಆಗಿದೆ ಜೊತೆಗೆ ಪೋಷಕರ ಕಡೆಯಿಂದ ಉಡುಗೊರೆಗಳು ಬಂದಿವೆ ಎನ್ನುವ ರೀತಿಯ ಸಾಕ್ಷಿಗಳು ಇವೆ ಎನ್ನುವುದು ಪೊಲೀಸರಿಂದ ತಿಳಿದ ಬಳಿಕ ಪೋಷಕರು ಕಂಗಲಾಗಿದ್ದರು.

ಸ್ಥಳದಲ್ಲಿಯೇ ತಾಯಿ ಅನ್ನಪೂರ್ಣ ದುಬೆ ಅವರು ಮಗಳು ಮೋಸ ಮಾಡಿದ್ದಾಳೆ, ಅವಳು ಮದುವೆ ಆಗುವ ಬಗ್ಗೆ ನಮಗೆ ಯಾವ ಸುಳಿವು ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಇದಾದ ಕೆಲ ತಿಂಗಳುಗಳ ಬಳಿಕ ಯುವಕನ ಕುಟುಂಬದವರು ಒಂದು ರಿಸೆಪ್ಶನ್ ಪಾರ್ಟಿಯನ್ನು ಅರೇಂಜ್ ಮಾಡಿದ್ದರು. ಅದಕ್ಕೆ ಆಹ್ವಾನ ಪತ್ರಿಕೆಯನ್ನು ಕೂಡ ಪ್ರಿಂಟ್ ಮಾಡಿಸಿ ಪೋಷಕರ ಕಡೆಗೂ ತಲುಪಿಸಿದರು.

ಅದರಲ್ಲಿ ಹಿಂದೂ ಯುವತಿಯು ಮುಸ್ಲಿಂ ಆಗಿ ಬದಲಾಗಿದ್ದಾಳೆ ಎಂದು ಬರೆಯಲಾಗಿತ್ತು ಹಾಗೂ ಅನಾಮಿಕ ದುಬೆ ಹೆಸರನ್ನು ಫಾತಿಮಾ ಎಂದು ಬದಲಾಯಿಸಲಾಗಿತ್ತು. ಇದು ಲವ್ ಜಿಹಾದ್ ಎಂದು ಆರೋಪಿಸುತ್ತಿರುವ ಪೋಷಕರು ಮಗಳು ಲವ್ ಮ್ಯಾರೇಜ್ ಆಗಿದ್ದರೆ ಧರ್ಮವನ್ನು ಯಾಕೆ ಅವರು ಬದಲಾಯಿಸಬೇಕಾಗಿತ್ತು ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಮಗಳ ಬಗ್ಗೆ ಕುಪಿತರಾದ ಪೋಷಕರು ಮಗಳು ಜೂನ್ 2ರಂದು ಸ.ತ್ತ ವಿಷಯ ಗೊತ್ತಾಗಿದೆ, ಅದಕ್ಕಾಗಿ ಜೂನ್ 11ನೇ ತಾರೀಕಿನಂದು ಆಕೆಗೆ ಶ್ರದ್ದಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿ ಮತ್ತೊಂದು ಆಹ್ವಾನ ಪತ್ರಿಕೆಯನ್ನು ಹೊರಡಿಸಿ ಎಲ್ಲರಿಗೂ ಹಂಚಿದ್ದಾರೆ.

ಅದೇ ರೀತಿ ಗ್ವಾಲಿಘಾಟ್ ಪ್ರದೇಶದಲ್ಲಿ ಸತ್ತ ಬಳಿಕ ಮಾಡುವ ಎಲ್ಲಾ ಅಂತಿಮ ವಿಧಿ ವಿಧಾನಗಳನ್ನು ಕೂಡ ಮಗಳ ಹೆಸರಿನಲ್ಲಿ ಮಾಡಿ ಮುಗಿಸಿ ತಿಥಿ ಊಟವನ್ನು ಕೂಡ ಹಾಕಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳು ವಿಡಿಯೋಗಳು ಮತ್ತು ಈ ವಿಷಯವು ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Advertisement