ಸೆಲೆಬ್ರಿಟಿಗಳು ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ಕುರಿತಾಗಿಯೂ ಸುದ್ದಿಯಾಗುತ್ತಾರೆ. ಈ ವಿಚಾರದಲ್ಲಿ ನಟಿ ಮಹಾಲಕ್ಷ್ಮಿ (Mahalakshmi) ಮಾತ್ರ ಹೊರತಾಗಿಲ್ಲ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಾಲಕ್ಷ್ಮಿ (Mahalakshmi) ಹಾಗೂ ರವೀಂದರ್ (Ravindar) ಅವರು ಸುದ್ದಿಯಲ್ಲಿದ್ದರು. ಕಳೆದ ವರ್ಷ ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನೂತನ ಜೋಡಿಯೂ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆದ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಇತ್ತ ಮಹಾಲಕ್ಷ್ಮಿ ಈ ಹಿಂದೆ ಅನಿಲ್ (Anil) ಎಂಬಾತನನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ ಎನ್ನಲಾಗಿತ್ತು. ಆದರೆ ಈ ಇಬ್ಬರೂ ಕೂಡ ವೈವಾಹಿಕ ಜೀವನದಿಂದ ದೂರವಾದರು.

ಇನ್ನೊಂದೆಡೆ ರವೀಂದರ್ ಕೂಡ ಪತ್ನಿಯಿಂದ ಬೇರ್ಪಟ್ಟು ಒಂಟಿ ಜೀವನ ನಡೆಸುತ್ತಿದ್ದರು. ಆದಾದ ನಂತರದಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದರ್ ಅವರು ಮನಸ್ಸುಪೂರ್ವಕವಾಗಿ ಒಪ್ಪಿ ಮದುವೆ ಮಾಡಿಕೊಂಡಿದ್ದರು. ಕಳೆದ ಆದರೆ ಇದೀಗ ನಟಿ ಮಹಾಲಕ್ಷ್ಮೀ ಇದೀಗ ತಮ್ಮ ಮಗನನ್ನು ಸೋಷಿಯಲ್ ಮೀಡಿಯಾದ ಮೂಲಕ ಪರಿಚಯಿಸುವ ಮೂಲಕ ಸುದ್ದಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿರುವ ನಟಿ ಮಹಾಲಕ್ಷ್ಮಿ ಅನೇಕ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ಅದಲ್ಲದೇ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ. ಮಹಾಲಕ್ಷ್ಮೀ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಫೋಟೋದಲ್ಲಿ ಮಗನ ಜೊತೆಗೆ ಆಕೆಯ ತಂದೆಯು ಇರುವುದನ್ನು ಕಾಣಬಹುದು.

ಅಪ್ಪಂದಿರ ದಿನದಂದು ನಟಿ ಮಹಾಲಕ್ಷ್ಮಿಯ ಪೋಸ್ಟ್ ವೈರಲ್ ಆಗಿದೆ. ಫೋಟೋದಲ್ಲಿ ಮಹಾಲಕ್ಷ್ಮಿ ಮತ್ತು ತಂದೆ ಮತ್ತು ನಟಿಯ ಮಗ ಇದ್ದು, ಮಗನ ಹೆಸರು ಸಚಿನ್ (Sachin) ಎನ್ನಲಾಗಿದೆ. ಈ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಇಷ್ಟು ದೊಡ್ಡ ಮಗನಿದ್ದಾನಾ ಎಂದು ನಟಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇವನು ಮಹಾಲಕ್ಷ್ಮಿಯ ಜೆರಾಕ್ಸ್ ಕಾಪಿ ಎಂದು ಕಮೆಂಟ್ ಮಾಡಿದ್ದಾರೆ.

ನೋಡಲು ದಪ್ಪಗೆ ಇರುವ ರವೀಂದರ್ ಅವರನ್ನು ಮಹಾಲಕ್ಷ್ಮಿಯವರು ಮದುವೆಯಾಗುತ್ತಿದ್ದಂತೆ, ಹಣಕ್ಕಾಗಿ ರವೀಂದರ್ ಅವರನ್ನು ಆಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗಷ್ಟೇ ರವೀಂದರ್ ದಂಪತಿಗಳು ಬೇರ್ಪಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಯಾವುದೇ ಸುದ್ದಿಗಳಿಗೂ ಕೂಡ ಕ್ಯಾರೆ ಎನ್ನದೇ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

Advertisement