ಚಂದನವನದ ತುಪ್ಪದ ಬೆಡಗಿ ಎಂದೇ ಖ್ಯಾತಿಗಳಿಸಿರುವ ರಾಗಿಣಿ ದ್ವಿವೇದಿ (Ragini Dwivedi) ಕೂಡ ಒಬ್ಬರು. ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ರಾಗಿಣಿಯವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಗಿಣಿ ನಟಿಸಿರುವ ಕೆಂಪೇಗೌಡ ವೀರಮದಕರಿ (Veeramadakari) ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಸುದೀಪ್ (Sudeep) ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ತೆರೆ ಮೇಲೆ ಹಂಚಿಕೊಂಡಿದ್ದು, ಬ್ಯುಸಿಯಾಗಿದ್ದಾರೆ.

ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿರುವ ನಟಿ ರಾಗಿಣಿಯವರು ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ವರ್ಕ್ ಔಟ್ (Work Out) ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವರ್ಕ್ ಔಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ಸುದ್ದಿಯಲ್ಲಿದ್ದು, ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ನಟಿಯ ಯೋಗ ಲುಕ್ ಸಖತ್ ಗ್ಲಾಮರಸ್ ಆಗಿದ್ದು, ಹಾಟ್ ಲುಕ್ ಇಂಟರ್ನೆಟ್ ನಲ್ಲಿ ಎಲ್ಲರ ಗಮನ ಸೆಳೆದಿದೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಗಮನ ಸೆಳೆಯುವ ನಟಿಯು ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಯೋಗ ಮಾಡುತ್ತಿರುವ ರುವ ವೀಡಿಯೋ ಶೇರ್ ಮಾಡುವ ಮೂಲಕ ತಮ್ಮ ಫಿಟ್ ನೆಸ್ ಬಗ್ಗೆ ರಿವೀಲ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ರಾಗಿಣಿ ಕ್ರಾಪ್ ಟಾಪ್, ಶರ್ಟ್‌ ಧರಿಸಿದ್ದು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದಲ್ಲದೇ ಧ್ಯಾನ, ಪ್ರಾಣಾಯಾಮ, ಅರ್ಧ ಚಂದ್ರಾಸನ ಸೇರಿದಂತೆ ಹಲವು ಆಸನಗಳನ್ನು ರಾಗಿಣಿ ಅಭ್ಯಾಸ ಮಾಡಿರುವುದನ್ನು ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಯೋಗ ಸರಿ ಈ ಮೈಮಾಟ ಪ್ರದರ್ಶನ ಯಾಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋಗೆ ಲೈಕ್ಸ್ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹಿಂದಿ ಸಿನಿಮಾರಂಗಕ್ಕೂ ಲಗ್ಗೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಹಿಂದಿ ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ಅದಲ್ಲದೇ ಮಲಯಾಳಂನ ಒಂದು ಸಿನಿಮಾದಲ್ಲಿ, ತಮಿಳಿನಲ್ಲಿ ಮೂರು ಸಿನಿಮಾಗಳಲ್ಲಿ, ಹಾಗೂ ತೆಲುಗಿನಲ್ಲಿ ಒಂದು ಸಾಂಗ್ ಗೆ ಸ್ಟೆಪ್ ಹಾಕಿದ್ದಾರೆ. ಅದಲ್ಲದೇ, ಕನ್ನಡದಲ್ಲಿ ‘ಬಿಂಗೋ’ ಜೊತೆಗೆ ‘IAS vs IPS’ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗೆ ನಟಿಯ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Advertisement