ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಪ್ರಿಯಾಮಣಿ ನಟಿಸದೆ ಇರುವ ಪಾತ್ರಗಳೇ ಇಲ್ಲ. ತಮಿಳು, ತೆಲುಗು, ಮಲಯಾಳಂ ಕನ್ನಡ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ ಪರಿಣಿತ ಅಭಿನೇತ್ರಿ ಎನಿಸಿಕೊಂಡಿದ್ದಾರೆ. ಕನ್ನಡತಿ ಆಗಿರುವ ಪ್ರಿಯಾಮಣಿ ಅವರು ಸುಲಲಿತವಾಗಿ ಐದಾರು ಭಾಷೆಗಳನ್ನ ಮಾತನಾಡಬಲ್ಲರು. ಹಾಗಾಗಿ ಅವರು ಯಾವ ಭಾಷೆಯಲ್ಲಿ ಸಿನಿಮಾ ಮಾಡುತ್ತಾರೋ ಅವರೇ ಆ ಸಿನಿಮಾಕ್ಕೆ ಡಬ್ಬಿಂಗ್ ಮಾಡುವುದು ವಿಶೇಷ.

ಪ್ರಿಯಾಮಣಿ ಇವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಕನ್ನಡದಲ್ಲಿ ಅಂತೂ ಪ್ರಿಯಾಮಣಿ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟಿ ಪ್ರಿಯಾಮಣಿ 35 ವರ್ಷ ಈಗಲೂ ಕೂಡ ಮೊದಲಿನಂತೆಯೇ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ ಅಷ್ಟೇ ಅಲ್ಲ ಇಂದಿಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ಸದ್ಯ, ನಟಿ ಪ್ರಿಯಾಮಣಿ ನಾಲ್ಕು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಅಭಿನಯಿಸುತ್ತಿದ್ದಾರೆ. ಪ್ರಿಯಾಮಣಿ ಅವರ ಹೇಳಿಕೆಯೊಂದು ಬಹಳ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಹೌದು, ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ಎನ್ನುವ ವಿಷಯದ ಬಗ್ಗೆ ಇದೀಗ ಹೆಚ್ಚು ಚರ್ಚೆ ನಡೆಯುತ್ತಿದೆ. ಮಹಿಳೆಯರಿಗೆ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಬೇಕು ಹೆಚ್ಚು ಅವಕಾಶಗಳು ಸಿಗಬೇಕು ಅಂದ್ರೆ ಅಷ್ಟು ಸುಲಭವಲ್ಲ.

ಹಲವರೊಂದಿಗೆ ನಟಿಯರು ಸ್ಪಂದಿಸಿದರೆ ಮಾತ್ರ ಅವಕಾಶಗಳು ಸಿಗುತ್ತವೆ ಎನ್ನುವ ಪರಿಪಾಠ ಆರಂಭವಾಗಿದೆ. ಮಿ ಟೂ ಅಭಿಯಾನ ಆರಂಭವಾದ ನಂತರ ಸಾಕಷ್ಟು ನಟಿಯರು ತಾವು ಸಿನಿಮಾ ರಂಗದಲ್ಲಿ ಅನುಭವಿಸಿದ ನೋವು ಕಿರುಕುಳ ಅವಮಾನ ಇವುಗಳ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಜನ ಇದರಿಂದ ಮತ್ತೇನಾದರೂ ಅನಾಹುತ ಆದರೆ ಎಂಬ ಭಯದಿಂದ ಆ ವಿಷಯಗಳನ್ನು ಮುಚ್ಚಿಡುತ್ತಾರೆ.

ಈಗಾಗಲೇ ಈ ವಿಷಯದ ಬಗ್ಗೆ ಸಾಕಷ್ಟು ಸ್ಟಾರ್ ನಟಿಯರು ಕೂಡ ಮಾತನಾಡಿದ್ದು ಇದೀಗ ಪ್ರಿಯಾಮಣಿಯ ಸರದಿ. ಹೌದು ಈಗ ನಟಿ ಪ್ರಿಯಾಮಣಿ ತಾವು ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಆರಂಭದಲ್ಲಿ ಪಟ್ಟ ಕಷ್ಟ ಕಿರುಕುಳ ಇವುಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಿನಿಮಾದಲ್ಲಿ ನಟಿಸುವಾಗ ಒಬ್ಬ ನಿರ್ದೇಶಕರು ಪ್ರಿಯಾಮಣಿ ಅವರ ಬಳಿ ಹೊಕ್ಕಳಿನ ಬಳಿ ಟ್ಯಾಟು ಹಾಕಿಕೊಳ್ಳುವಂತೆ ಸೂಚಿಸಿದ್ದರಂತೆ.

ಇದು ಪ್ರಿಯಾಮಣಿ ಅವರಿಗೆ ಇಷ್ಟವಿರಲಿಲ್ಲ. ಆದರೆ ಅವರ ಮಾತನ್ನು ಕೇಳದೆ ಬೇರೆ ದಾರಿಯೂ ಇರಲಿಲ್ಲ. ಅದಕ್ಯೂ ಪ್ರಿಯಾಮಣಿ ನಿರ್ದೇಶಕರ ಮಾತಿಗೆ ಹೆಚ್ಚು ಪುಷ್ಟಿ ನೀಡಲಿಲ್ಲ. ತಮ್ಮ ವಿಲ್ ಪವರ್ ಹಾಗೂ ಪ್ರತಿಭೆಯಿಂದ ಮೇಲೆ ಬಂದಿರುವ ನಟಿ ಪ್ರಿಯಾಮಣಿ ಇಂತಹ ಹಲವು ಸಂಕಷ್ಟಗಳನ್ನು ಎದುರಿಸಿ ಇಂದು ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

ಸೌತ್ ಇಂಡಿಯಾ ಸಿನಿಮಾ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಎನಿಸಿರುವ ಪ್ರಿಯಾಮಣಿ, ಎಲ್ಲರೂ ಇಷ್ಟಪಡುವಂತಹ ಪ್ರತಿಭೆಯನ್ನು ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಟಿ ಪ್ರಿಯಾಮಣಿ ಇತರ ನಟಿಯರಂತೆ ಮದುವೆಯಾದ ನಂತರ ಸಿನಿಮಾದಿಂದ ದೂರ ಉಳಿದಿಲ್ಲ. ಮದುವೆಯಾದರು ತಮ್ಮ ಕೆರಿಯರ್ ಅನ್ನು ಬದಿಗೊತ್ತದೆ, ಈಗಲೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವತ್ತ ಗಮನವಹಿಸಿದ್ದಾರೆ.

ಅಷ್ಟೇ ಅಲ್ಲ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕೂಡ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಾರೆ. ಅತ್ಯಂತ ಸುರದ್ರೂಪಿ ಹಾಘೂ ಪ್ರತಿಭಾವಂತ ನಟಿ ಪ್ರಿಯಾಮಣಿ. ಹಾಗಾಗಿ ಅವರಿಗೆ ಈಗಲೂ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬರುವುದರಲ್ಲಿ ಸಂಶಯವಿಲ್ಲ. ನಟಿ ಪ್ರಿಯಾಮಣಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Advertisement