ಅಭಿಷೇಕ್ ತಾನು ಪ್ರೀತಿಸಿದ ಹುಡುಗಿ ಅವಿವಾ ಗೆ(Abhishek Ambarish wife Aviva) ಮೂರು ಗಂಟು ಹಾಕಿ ಕೈ ಹಿಡಿದಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಲಂಡನ್ ನಲ್ಲಿ ಓದುತ್ತಿರುವ ವೇಳೆ ಇವರಿಬ್ಬರ ನಡುವೆ ಪ್ರೀತಿಯಾಗಿ ಇದೀಗ ಹಸೆ ಮಣೆ ಏರಿದ್ದಾರೆ. ಮದುವೆ ಮುಗಿಯುತ್ತಿದ್ದಂತೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ಸ್ನೇಹಿತರಿಗೆ ದೊಡ್ಡ ಪಾರ್ಟಿಯನ್ನು ಕೊಟ್ಟಿದ್ದಾರೆ. ಈ ಪಾರ್ಟಿಯಲ್ಲಿ ಅಂಬರೀಶ್ ಹಿಟ್ ಸಾಂಗ್ ಗಳಿಗೆ (Ambarish hit songs)ಅಭಿಷೇಕ್ ಅವಿವಾ ಸುಮಲತಾ ದರ್ಶನ್ ಯಶ್ ಹೆಜ್ಜೆ ಹಾಕಿದ್ದಾರೆ.

 

 

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯಾಗಿ (Abhishek Ambarish wedding)ಐದು ದಿನದ ನಂತರ ಸ್ಯಾಂಡಲ್ ವುಡ್ ನಾ ಸೆಲೆಬ್ರಿಟಿಗಳೆಲ್ಲರಿಗು(sandalwood celebrities) ಭರ್ಜರಿ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಸುಮಲತಾ, ಅಭಿಷೇಕ್ ,ಅವಿವಾ, ದರ್ಶನ್ ,ಯಶ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

 

ಇದನ್ನು ನೋಡಿದ ಅಭಿಮಾನಿಗಳು ಇಲ್ಲಿ ಕಿಚ್ಚ ಸುದೀಪ್(kiccha Sudeep) ಕೂಡ ಇರಬೇಕಾಗಿತ್ತು ಎಂದು ಅಭಿ ಮದುವೆಯ ಪಾರ್ಟಿಯ(abhi wedding party) ಡ್ಯಾನ್ಸ್ ಜೊತೆಗೆ ದರ್ಶನ್ ಹಾಗೂ ಕಿಚ್ಚ ಸುದೀಪ್ (Darshan Sudeep dance)ಒಟ್ಟಿಗೆ ಡಾನ್ಸ್ ಮಾಡಿರುವ ಹಳೆ ವಿಡಿಯೋಗಳನ್ನು ಮರ್ಜ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಫ್ಯಾನ್ ವಾರ್ (fan war)ನಡೆಯುತ್ತಿದೆ. ಹಾಗಾಗಿ ಕನ್ನಡ ಇಂಡಸ್ಟ್ರಿಯ ಎಲ್ಲಾ ನಟರು ಒಟ್ಟಾಗಿದ್ದರೆ ಫ್ಯಾನ್ ವಾರ್ ಕೂಡ ಇರುವುದಿಲ್ಲ ಕಿಚ್ಚ ಸುದೀಪ್ ಹಾಗೂ ದರ್ಶನ್ ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ವಿಡಿಯೋಗಳನ್ನು ಮಾಡುತ್ತಿದ್ದಾರೆ.

Advertisement