ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ (Appu Fan Special Tattoo) ಫ್ಯಾನ್ಸ್ ಎಲ್ಲೆಡೆ ಇದ್ದಾರೆ. ದೂರದ ಹಿಮಾಲಕ್ಕೆ ಹೋದ್ರು ಅಲ್ಲಿ ಅಪ್ಪು ಫೋಟೋ ತೆಗೆದುಕೊಂಡು ಹೋಗಿರುತ್ತಾರೆ. ಮನೆ ಗೋಡೆ ಮೇಲೂ ಅಪ್ಪು ಫೋಟೋ ಇರುತ್ತದೆ. ಅದಕ್ಕೆ ಪೂಜೆಯನ್ನೂ ಮಾಡಿರೋ ಅಭಿಮಾನಿಗಳು ಇದ್ದಾರೆ. ಮೋಬೈಲ್ ಸ್ಕ್ರೀನ್ ಮೇಲೆ ಹೀಗೆ ಎಲ್ಲೆಡೆ ಅಪ್ಪು ಇದ್ದೇ ಇರುತ್ತಾರೆ. ಪುನೀತ್ ಪಡೆದ (Puneeth Crazy Fan Tattoo) ಈ ಪ್ರೀತಿ ಎಂದೂ ಮಾಸಿ (Power Star Puneeth) ಹೋಗೋದಿಲ್ಲ ಬಿಡಿ. ಅಪ್ಪು ಅಭಿಮಾನಿಗಳ ಲೆಕ್ಕದಲ್ಲಿ ಕೇವಲ ಹುಡುಗರು, ಯುವಕರು ಇಲ್ಲ, ಹುಡುಗಿಯರೂ ಇದ್ದಾರೆ. ಒಬ್ಬ ಯುವತಿ ಅಪ್ಪು ಅಪ್ಪಟ (Appu Tattoo on Chest)  ಅಭಿಮಾನಿಯಾಗಿದ್ದಾರೆ.

ಅಪ್ಪು ಇಲ್ಲದ ಈ ಒಂದು ಸಮಯದಲ್ಲಿ ಅಪ್ಪು ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಚ್ಚೆ ಹಾಕಿಸಿಕೊಂಡ ಆ ಜಾಗ ನಿಜಕ್ಕೂ ತುಂಬಾನೇ ವಿಶೇಷವಾಗಿದೆ.

Kannada Actor Puneeth Rajkumar Crazy Fan got Appu Tattoo on her chest
ಅಭಿಮಾನಿಗಳ ಎದೆಯೊಳಗೆ ಅಪ್ಪು ಅಮರ

 

 

ಅಭಿಮಾನಿಯ ಎದೆ ಮೇಲೆ ಅಪ್ಪು ಸ್ಪೆಷಲ್ ಟ್ಯಾಟೂ!

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಮನದಲ್ಲಿ ಶಾಶ್ವತ ಜಾಗ ಮಾಡಿಕೊಂಡಿದ್ದಾರೆ. ಅಪ್ಪು ದೈಹಿಕವಾಗಿ ಈಗ ಇಲ್ಲ ಅನ್ನೋ ನೋವು ಇದ್ದೇ ಇದೆ. ಆದರೆ ಪುನೀತ್ ಎಲ್ಲೂ ಹೋಗಿಯೇ ಇಲ್ಲ. ಅಪ್ಪು ನೆನಯದೇ ಇರೋ ದಿನಗಳೂ ಇಲ್ಲ ನೋಡಿ. ಪುನೀತ್ ಅಭಿಮಾನಿಗಳ ಮನದಲ್ಲಿ ಅಪ್ಪು ಇನ್ನೂ ಹಾಗೆ ಇದ್ದಾರೆ.

 

ಅಲ್ಲಿ ಇಲ್ಲಿ ಎಲ್ಲೆಡೆ ಅಪ್ಪು ಇನ್ನೂ ಜೀವಂತ

ಪುನೀತ್ ಸಿನಿಮಾ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಅವರ ಮುಗ್ಧ ನಗು ಎಲ್ಲರ ಕಣ್ಮುಂದೇನೆ ಹಾಗೇ ಇದೆ. ಇದರಿಂದ ಅಪ್ಪು ಅಮರ ಅನ್ನೋ ಮಾತನ್ನ ಎಲ್ಲರೂ ಒಪ್ಪುತ್ತಾರೆ.

ಅಪ್ಪು ಎಲ್ಲರ ಪ್ರತಿ ಚಟುವಟಿಕೆಯಲ್ಲೂ ಇದ್ದಾರೆ. ಸಾಹಸದಲ್ಲಿ ಅಪ್ಪು ಕಾಣಿಸುತ್ತಾರೆ. ನೃತ್ಯದಲ್ಲಿ ಅಪ್ಪು ಹೊಳೆಯುತ್ತಾರೆ. ಅಭಿಮಾನಿಗಳ ಮನದಲ್ಲಿ ಇನ್ನೂ ಮಿಡಿಯುತ್ತಾರೆ.

ಅಭಿಮಾನಿಗಳ ಎದೆಯೊಳಗೆ ಅಪ್ಪು ಅಮರ

ಅಪ್ಪು ಅನ್ನದೇ ಇರೋ ದಿನಗಳೇ ಇಲ್ಲ. ಯಾವುದೋ ಒಂದು ಕಾರಣಕ್ಕೆ ಅಪ್ಪು ನೆನಪಿಗೆ ಬರ್ತಾನೇ ಇರ್ತಾರೆ. ಅಪ್ಪು ಅಭಿಮಾನಿಗಳ ಮನೆ ದೇವರಾಗಿದ್ದಾರೆ. ಪ್ರತಿ ದಿನ ದೇವರಂತೆ ಪೂಜಿಸಲ್ಪಡ್ತಾರೆ.

ಅಪ್ಪು ಅಭಿಮಾನಿಗಳಲ್ಲಿ ಎಲ್ಲರೂ ಇದ್ದಾರೆ. ಹುಡುಗರು-ಹುಡುಗಿಯರು ಅನ್ನೋ ಭಾವನೆನೇ ಇಲ್ಲ. ಎಲ್ಲರಿಗೂ ಅಪ್ಪು ಬೇಕು. ಅಷ್ಟೊಂದು ಪ್ರಭಾವ ಬೀರಿರೋ ಅಪ್ಪು ಅಭಿಮಾನಿಯಾಗಿರೊ ಯುವತಿಯೊಬ್ಬಳ್ಳು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

Kannada Actor Puneeth Rajkumar Crazy Fan got Appu Tattoo on her chest
ಎದೆ ಮೇಲೆ ಅಪ್ಪು ಹಚ್ಚೆ-ವಿಡಿಯೋ ಸಿಕ್ಕಾಪಟ್ಟೆ ವೈರಲ್

ಯುವತಿ ಎದೆ ಮೇಲೆ ಅಪ್ಪು ಸ್ಪೆಷಲ್ ಹಚ್ಚೆ

ಹೃದಯದ ಹತ್ತಿರವೇ ಅಪ್ಪು ಹಚ್ಚೆ ಹಾಕಿಸಿಕೊಂಡು ಅಪ್ಪು ಅಭಿಮಾನಿ ತನ್ನ ಅಭಿಮಾನ ಮೆರೆದಿದ್ದಾರೆ. ಸಾಮಾನ್ಯವಾಗಿ ಯವಕರು ಈ ಕೆಲಸ ಮಾಡುತ್ತಾರೆ. ಆದರೆ ಈ ಯುವತಿ ಎದೆ ಮೇಲೆ ಅಪ್ಪು ಹಚ್ಚೆ ಹಾಕಿಸಿಕೊಂಡು ಅಭಿಮಾನವನ್ನ ತೋರಿದ್ದಾರೆ.

ಅಪ್ಪು ಅಭಿಮಾನಿಗಳ ಮನದಲ್ಲಿ ಈ ರೀತಿ ಶಾಶ್ವತ ಜಾಗ ಮಾಡಿಕೊಂಡಿದ್ದಾರೆ. ಇವರ ಅಭಿಮಾನಕ್ಕೆ ಏನಂದ್ರೆ ಏನೂ ಸಾಟಿಯಿಲ್ಲ. ಇವರ ಅಭಿಮಾನಕ್ಕೆ ಕಳೆದು ಹೋಗದವರೂ ಇಲ್ಲ ಅಂತಲೇ ಹೇಳಬಹುದು.

ಪುನೀತ್ ರಾಜ್ ಕುಮಾರ್ ಅಭಿನಯ ಸಿನಿಮಾಗಳು ಈಗಲೂ ಟಿವಿಯಲ್ಲಿ ಪ್ರಸಾರ ಆಗುತ್ತವೆ. ಅವುಗಳನ್ನ ನೋಡಿದ್ರೆ, ಅಪ್ಪು ಅಗಲಿಲ್ಲ, ಅಪ್ಪು ಇನ್ನೂ ಇದ್ದಾರೆ ಅನ್ನೋ ಭಾವನೆ ಮೂಡುತ್ತಿದೆ.

ಇದನ್ನೂ ಓದಿ: Adipurush: ಪ್ರಭಾಸ್ ಸಿನಿಮಾದ ಎಕ್ಸೈಟ್​​ಮೆಂಟ್, ಟಿಕೆಟ್ ಬುಕ್ಕಿಂಗ್ ಸೈಟ್ ಕ್ರಾಶ್

ಪುನೀತ್ ಡೈರೆಕ್ಟರ್ ಆ್ಯಕ್ಟರ್ ಅನ್ನೋದು ಗೊತ್ತಲ್ವೇ ?

ಅಷ್ಟೊಂದು ಜೀವಂತಿಕೆಯಿಂದಲೇ ಪುನೀತ್ ರಾಜ್‌ ಕುಮಾರ್ ಅಭಿನಯಿಸಿದ್ದಾರೆ. ಡೈರೆಕ್ಟರ್ ಆ್ಯಕ್ಟರ್ ಆಗಿದ್ದ ಅಪ್ಪು ಶೂಟಿಂಗ್ ಸೆಟ್‌ಗೆ ಖಾಲಿ ಹಾಳೆ ರೀತಿನೇ ಹೋಗ್ತಾಯಿದ್ದರು.

ಡೈರೆಕ್ಟರ್ ಏನು ಹೇಳ್ತಾರೋ ಅದನ್ನ ಕೇಳಿಕೊಂಡು ಅವರಿಗೆ ಬೇಕಾಗೋ ರೀತಿಯಲ್ಲಿಯೇ ಅಭಿನಯಿಸಿ ಬರ್ತಾ ಇದ್ದರು. ಇದು ಅಪ್ಪು ಅನ್ನೋ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಅಪ್ಪು ಇಲ್ಲ ಅನ್ನೋ ನೋವು ಇನ್ನೂ ಇದೆ.

Advertisement